ಇಂದಿನ ಡಿಜಿಟಲ್ ಯುಗದಲ್ಲಿ ನಾವು ಬ್ಯಾಂಕಿಂಗ್‌ನಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಎಲ್ಲದಕ್ಕೂ ಇಂಟರ್ನೆಟ್ ಅವಲಂಬಿಸಿದ್ದೇವೆ. ಆದರೆ, ತಂತ್ರಜ್ಞಾನ ಬೆಳೆದಂತೆ ಸೈಬರ್ ವಂಚನೆಗಳೂ ಹೆಚ್ಚುತ್ತಿವೆ. ಕರ್ನಾಟಕ ಮೀಡಿಯಾ (Karnataka Media) ತನ್ನ ಓದುಗರಿಗಾಗಿ ಡಿಜಿಟಲ್ ಲೋಕದಲ್ಲಿ ಸುರಕ್ಷಿತವಾಗಿರಲು 5 ಪ್ರಮುಖ ಸಲಹೆಗಳನ್ನು ಇಲ್ಲಿ ನೀಡುತ್ತಿದೆ.
1. ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (2FA) ಸಕ್ರಿಯಗೊಳಿಸಿ
ಕೇವಲ ಪಾಸ್‌ವರ್ಡ್ ಮಾತ್ರ ನಿಮ್ಮ ಖಾತೆಯನ್ನು ರಕ್ಷಿಸಲು ಸಾಕಾಗುವುದಿಲ್ಲ. ನಿಮ್ಮ ಜಿಮೇಲ್ ಅಥವಾ ಬ್ಯಾಂಕಿಂಗ್ ಆಪ್‌ಗಳಲ್ಲಿ ‘2-Step Verification’ ಆನ್ ಮಾಡಿ. ಇದು ನಿಮ್ಮ ಖಾತೆಗೆ ಎರಡನೇ ಹಂತದ ಭದ್ರತೆಯನ್ನು ನೀಡುತ್ತದೆ.
2. ಸಾಫ್ಟ್‌ವೇರ್ ಅಪ್‌ಡೇಟ್ ನಿಯಮಿತವಾಗಿ ಮಾಡಿ
ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಅಪ್‌ಡೇಟ್ ಬಂದಾಗ ಅದನ್ನು ತಕ್ಷಣವೇ ಇನ್‌ಸ್ಟಾಲ್ ಮಾಡಿ. ಇವು ಹ್ಯಾಕರ್‌ಗಳು ನಿಮ್ಮ ಸಿಸ್ಟಮ್ ಒಳಗೆ ನುಗ್ಗದಂತೆ ತಡೆಯುವ ‘ಸೆಕ್ಯೂರಿಟಿ ಪ್ಯಾಚ್’ಗಳನ್ನು ಹೊಂದಿರುತ್ತವೆ.
3. ಪಬ್ಲಿಕ್ ವೈ-ಫೈ ಬಳಸುವಾಗ ಎಚ್ಚರ
ರೈಲ್ವೇ ಸ್ಟೇಷನ್ ಅಥವಾ ಹೋಟೆಲ್‌ಗಳಲ್ಲಿ ಸಿಗುವ ಉಚಿತ ವೈ-ಫೈ ಬಳಸಿ ಎಂದಿಗೂ ಹಣದ ವಹಿವಾಟು ನಡೆಸಬೇಡಿ. ಇಂತಹ ನೆಟ್‌ವರ್ಕ್‌ಗಳನ್ನು ಹ್ಯಾಕ್ ಮಾಡುವುದು ಸುಲಭ.4. ಬಲಿಷ್ಠ ಪಾಸ್‌ವರ್ಡ್ ಬಳಸಿ
4. ಬಲಿಷ್ಠ ಪಾಸ್‌ವರ್ಡ್ ಬಳಸಿ
ನಿಮ್ಮ ಹೆಸರು ಅಥವಾ ಜನ್ಮದಿನಾಂಕವನ್ನೇ ಪಾಸ್‌ವರ್ಡ್ ಆಗಿ ಇಡಬೇಡಿ. ಅಕ್ಷರಗಳು, ಅಂಕಿಗಳು ಮತ್ತು ಚಿಹ್ನೆಗಳನ್ನೊಳಗೊಂಡ (ಉದಾ: KnMed@2026#)
5. ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ
ನಿಮಗೆ ಬರುವ ಅಪರಿಚಿತ ಎಸ್ಸೆಮ್ಮೆಸ್ ಅಥವಾ ಇಮೇಲ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೊದಲು ಅವುಗಳ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಿ.